ಮಖಾ ನಕ್ಷತ್ರ -
	ರಾಶಿಚಕ್ರ ಪ್ರದೇಶಕ್ಕೆ ಸೇರಿದ, ಸಿಂಹ (ಲಿಯೋ) ರಾಶಿಯಲ್ಲಿಯ ಪ್ರಧಾನ ತಾರೆ (ಅಲ್ಫಾ_ಲಿಯೋನಿಕ್; ರೆಗ್ಯುಲಸ್). ಕ್ರಾಂತಿವೃತ್ತದ ಮೇಲೆ ಇದೆ. ವಿಷುವದಂಶ 10 ಗಂ 7 ಮಿ 12 ಸೆ; ಘಂಟಾ ವೃತ್ತಾಂಶ 12(4(31(ದ; ಕಾಂತಿಮಾನ 1.36. ನಿರಪೇಕ್ಷ ಕಾಂತಿಮಾನ 0.7. ರೋಹಿತ ಪ್ರರೂಪ B7. ಸೂರ್ಯನಿಂದ 84 ಜ್ಯೋತಿವರ್ಷಗಳ ದೂರದಲ್ಲಿದೆ. ಇದು ದ್ವಿತಾರೆ (ಡಬಲ್) ಆಗಿದ್ದರೂ ಇದರಲ್ಲಿಯ ಘಟಕಗಳೆರಡಕ್ಕೂ ಒಂದೇ ನಿಜಚಲನೆ (ಪ್ರಾಪರ್‍ಮೋಷನ್) ಇರುವುದರಿಂದ ಯಮಳ ತಾರೆಯೆಂದು ಸಂಬೋಧಿಸುವುದುಂಟು.

	ಭಾರತೀಯ ಜ್ಯೋತಿಷ್ಯದ ಪ್ರಕಾರ ಇಪ್ಪತೇಳು ನಕ್ಷತ್ರಗಳ ಪೈಕಿ ಹತ್ತನೆಯದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ